ಮಧುಗಿರಿ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ಹೆಸರು ಅಲ್ಲಿಯ ಬೆಟ್ಟದಲ್ಲಿ ಸಿಗುತ್ತಿದ್ದ ಜೇನಿನಿಂದ (ಮಧು) ಬಂದಿದೆ. ಈ ಬೆಟ್ಟವು ಏಷಿಯಾ ಖಂಡದಲ್ಲಿನ ಅತಿದೊಡ್ಡ ಏಕಶಿಲಾ ಪರ್ವತ. ಇದು ಪಾವಗಡದಿಂದ ಬಳ್ಳಾರಿಯವರೆಗೆ ಹರಡಿರುವ ಪರ್ವತ ಶ್ರೇಣಿಯ ಭಾಗವಾಗಿದೆ. ಸುತ್ತಲಿನ ಪ್ರದೇಶವು ಗಣಿಗಾರಿಕೆಯ ಪ್ರಮುಖ ತಾಣವಾಗಿದೆ.
ಇದು ಹಿಂದೆ ಮೈಸೂರು ರಾಜರ ಒಡೆತನದಲ್ಲಿ ಒಂದು ಮುಖ್ಯ ಠಾಣೆಯಾಗಿತ್ತು ಮತ್ತು ಸಿದ್ದನಾಯಕನೆಂಬ ಸೈನ್ಯಾಧಿಕಾರಿಯು ಆಡಳಿತ ಮಾಡುತಿದ್ದನು. ಬೆಟ್ಟದಲ್ಲಿ ಈಗಲೂ ಒಂದು ಕೋಟೆ ಇದೆ. ಇಲ್ಲಿ ಇರುವ ದಂಡಿನ ಮಾರಮ್ಮ ದೇವಿ ಶಕ್ತಿ ದೇವತೆ ಬಹಳ ಪ್ರಸಿದ್ದಿ. ಹಿಂದೆ ಇಲ್ಲಿನ ಬೆಟ್ಟದಲ್ಲಿ ಸೀತಾಫಲ ಮತ್ತು ದಾಳಿಂಬೆ ಹಣ್ಣುಗಳು ಬಹಳ ಬೆಳೆಯುತ್ತಿದ್ದವು.

ಇತಿಹಾಸ ಕೆದಕಿದಾಗ ಮಧುಗಿರಿಯ ಭಸ್ಮಾಂಗಿ ಬೆಟ್ಟದ ಇತಿಹಾಸ
Also Read – Madhugiri Hill Fort – Trekking (5.6km very exiting tough trek)
ಪರಿಚಯ
ಭಸ್ಮಾಂಗಿ ಬೆಟ್ಟ ಎಂಬುದು ತುಮಕೂರು ಜಿಲ್ಲೆಗೆ ಸೇರಿದ ಮದುಗಿರಿ ತಾಲ್ಲೂಕಿನ ಒಂದು ಪುಟ್ಟ ಗುಡ್ಡ ಇದನ್ನು ಎಲ್ಲರೂ ಬೆಟ್ಟವೆಂದೆ ಕರೆಯುವರು.ಭಸ್ಮಾಂಗಿ ಬೆಟ್ಟವನ್ನು ಬಸವಂಗಿ ಬೆಟ್ಟ ಎಂತಲೂ ಕರೆಯುತ್ತಾರೆ. ಭಸ್ಮಾಂಗೇಶ್ವರನ ದೇವಸ್ಥಾನದಿಂದ ಭಸ್ಮಾಂಗಿ ಎಂದು ಕರೆಯುತ್ತಾರೆ. ಈ ಭಸ್ಮಾಂಗಿ ಬೆಟ್ಟ ಕಡಿದಾದ ಗ್ರಾನೈಟ್ ಶಿಲೆಗಳಿಂದ ಕೂಡಿದೆ. ಈ ಬೆಟ್ಟದಲ್ಲಿ ಎಲ್ಲಾ ಬೆಟ್ಟದ್ದಲ್ಲು ಇರುವ ಹಾಗೆ ಬಂಡೆಯ ಮೇಲೆ ಹನುಮಂತನ ಉಬ್ಬು ಶಿಲೆಯಿದೆ. ಅಲ್ಲಲ್ಲಿ ಕೊಳಗಳಿದ್ದು ನೀರು ಪಾರದರ್ಶಕವಾಗಿರುವುದು ವಿಶೇಷ. ತುಮಕೂರು ಜಿಲ್ಲೆಯಲ್ಲಿ ಬೆಟ್ಟಗಳು ಹಾಗೂ ಕೋಟೆಗಳಿಗೇನು ಕೊರತೆಗಳಿಲ್ಲ. ತುಮಕೂರನ್ನು ಕೋಟೆನಾಡು ಮತ್ತು ಗಿರಿ ನಾಡು ಎಂದು ಕರೆಯಬಹುದು. ಇದನ್ನು ಭಸ್ಮಾಂಗಿ ಬೆಟ್ಟ, ಭಸ್ಮಾಂಗಿ ಕೋಟೆ ಹಾಗೂ ಭಸ್ಮಾಂಗಿ ಕಾವಲ್ ಎಂತಲೂ ಕರೆಯುತ್ತಾರೆ. ಸಮುದ್ರ ಮಟ್ಟದಿಂದ 678 ಮೀಟರ್ ಅಂದರೆ 2305 ಅಡಿ ಎತ್ತರ ಇದೆ. ಭಸ್ಮಾಂಗಿ ಒಂದು ಗ್ರಾಮ ಪಂಚಾಯಿತಿಯಾಗಿದ್ದು 2011 ಜನಗಣತಿ ಪ್ರಕಾರ 450 ಜನಸಂಖ್ಯೆ ಹೊಂದಿದೆ. ಬನ್ನಿ ಭಸ್ಮಾಂಗೇಶ್ವರನ ಸನ್ನಿಧಿಯ ಭಸ್ಮಾಂಗಿ ಬೆಟ್ಟದ ಇತಿಹಾಸವನ್ನು ಇಂದು ಅರಿಯೋಣ.

ಇತಿಹಾಸ
ತುಮಕೂರು ನಗರದ ಉತ್ತರಕ್ಕೆ 42 ಕಿಲೋಮೀಟರ್ ದೂರದಲ್ಲಿರುವ ಭಸ್ಮಾಂಗಿ ಎಂಬುದು ಕೋಟೆಯುಳ್ಳ ಒಂದು ಪುಟ್ಟ ಬೆಟ್ಟ. ಇಲ್ಲಿ ಮೊದಲು ಕೋಟೆ ಕಟ್ಟಿದವರು ಬೂದಿಬಸವಪ್ಪ ನಾಯಕ ಎಂಬುವವರು ಮಣ್ಣಿನಲ್ಲಿ ಕೋಟೆ ಕಟ್ಟಿದ್ದರು. ಇದಾದ ನಂತರ ಟಿಪ್ಪು ಸುಲ್ತಾನ್ ತಂದೆ ಹೈದರಾಲಿ ಈ ಪ್ರದೇಶವನ್ನು ಕ್ರಿಸ್ತ ಶಕ-1768ರಲ್ಲಿ ವಶಪಡಿಸಿಕೊಂಡನು. ಬೂದಿ ಬಸವಪ್ಪನಾಯಕ ಕಟ್ಟಿಸಿದ್ದ ಮಣ್ಣಿನ ಕೋಟೆಯನ್ನು ಕೆಡವಿ ಇಟ್ಟಿಗೆ ಮತ್ತು ಕಲ್ಲಿನಿಂದ ಕೋಟೆಯನ್ನೂ ಅರಮನೆಯನ್ನೂ ಕಟ್ಟಿಸಿದ.ಭಸ್ಮಾಂಗಿ ಕೋಟೆ ಬಿಜವರ ತೋಟದ ಸಿದ್ಧಲಿಂಗ ಭೂಪಾಲ ಮತ್ತು ಮುಮ್ಮಡಿ ಚಿಕ್ಕಭೂಪಾಲ ಈ ಇಬ್ಬರು ಪ್ರಸಿದ್ಧ ದೊರೆಗಳ ಕೇಂದ್ರವಾಗಿತ್ತು.ಮುಮ್ಮಡಿ ಚಿಕ್ಕಭೂಪಲ ಕನ್ನಡ ಮತ್ತು ಸಂಸ್ಕಂತಕ್ಕೆ ಪ್ರೋತ್ಸಾಹ ನೀಡುತ್ತಿದ್ದನು. ಅಲ್ಲದೆ ತಾನೇ ಅಭಿನವ ಭಾರತ ಸೌರಸಂಗ್ರಹವೆಂಬ ಸಂಸ್ಕಂತ ಗ್ರಂಥವನ್ನು ಬರೆದಿದ್ದನು. ಚಿಕ್ಕದೇವರಾಜ 17ನೆಯ ಶತಮಾನದ ಅಂತ್ಯದಲ್ಲಿ ಇದನ್ನು ಗೆದ್ದಕೊಂಡುನು. ಹಿಂದೆ ಇದು ಪಾಳೆಯಪಟ್ಟಿನ ಕೇಂದ್ರವಾಗಿತ್ತು. ಮಧುಗಿರಿಯ ವಾಯವ್ಯದಲ್ಲಿರುವ ಸಿದ್ಧಾಪುರದಲ್ಲಿ ಒಂದು ಹಳೆ ಕೋಟೆ ಇದೆ. ಇಲ್ಲಿಯ ಶಾಸನದ ಪ್ರಕಾರ ಬಿಜವರದ ಮಹಾನಾಡುಪ್ರಭು ಚಿಕ್ಕಪ್ಪಗೌಡ ಕ್ರಿಸ್ತ ಶಕ-1593ರಲ್ಲಿ ಭಸ್ಮಾಂಗಿ ಕಟ್ಟಿದನೆಂದು ತಿಳಿದುಬರುತ್ತದೆ.
ಕೋಟೆಯ ರಚನೆ (ವಿನ್ಯಾಸ)

ಭಸ್ಮಾಂಗಿ ಕೋಟೆಯು ಬಡವನಹಳ್ಳಿ ಮೂಲಕ ಹಾದು ಹೋದರೆ 20 ಕಿಲೋಮೀಟರ್ ದೂರವಾಗುತ್ತದೆ. ಆದಾಗ್ಯೂ, ಬಡವನಹಳ್ಳಿಗಿಂತ ಮುಂಚೆಯೇ ರಾಜ್ಯ ಹೆದ್ದಾರಿ ಅಂತ್ಯಗೊಳ್ಳುತ್ತದೆ. 6 ಕಿಲೋಮೀಟರ್ ಉತ್ತಮ ರಸ್ತೆಯಿದೆ ಉಳಿದಂತೆ ಮುಂದಕ್ಕೆ ಹೋದಂತೆ ರಸ್ತೆ ಹಾಳಾಗಿದೆ.ಈ ಬೆಟ್ಟವು ಪಶ್ಚಿಮ ಭಾಗದಲ್ಲಿ ಹೆಚ್ಚಾಗಿ ಕಲ್ಲುಹೂವು ಮತ್ತು ಪೂರ್ವ ಭಾಗದಲ್ಲಿ ಬಂಡೆಗಳ ಮಿಶ್ರಣವಾಗಿದೆ.ಬೆಟ್ಟದ ಈ ಪೂರ್ವ ದಿಕ್ಕಿನಿಂದ ಬೆಟ್ಟವನ್ನು ಹತ್ತುವುದಕ್ಕೆ ಕಡಿದಾಗಿಲ್ಲವಾದರಿಂದ ಈ ದಾರಿಯನ್ನು ಆರಿಸಿಕೊಳ್ಳುವುದು ಒಳಿತು. ಈ ಪೂರ್ವ ದಾರಿಯಲ್ಲಿ ಹೋಗುವಾಗ ಒಂದು ಗುಡಿಯಿದೆ. ಎರಡನೇ ಗುಡಿ ಹನುಮಂತನಿಗೆ ಅರ್ಪಿತವಾದ ದೇವಾಲಯವಾಗಿದೆ.

ಕೋಟೆಯ ಮೊದಲ ಹೆಬ್ಬಾಗಿಲು ಹೊರಗಿನ ಮಾರ್ಗವು ಎತ್ತರಿಸಿದ ವೇದಿಕೆಗಳಿಂದ ಸುತ್ತುವರಿದಿದೆ. ಇಲ್ಲಿ ಕಲ್ಲಿನ ಮೇಲೆ ಮೀನಿನ ಚಿತ್ರವನ್ನು ಕೆತ್ತಲಾಗಿದೆ ಈ ಮೀನು ಕೋಟೆಗೆ ಎದುರಾಗಿದೆ. ಇದು ಯಾವುದೋ ಒಂದು ದಿಕ್ಕಿಗೆ ಏನನ್ನೊ ಸೂಚಿಸುತ್ತಿದೆ ಎಂಬುದು ನನ್ನ ವಯಕ್ತಿಕ ಅಭಿಪ್ರಾಯ, ಆದರೂ ಮೀನು ಸಿರಿ ಸಂಪತ್ತಿನ ಸೂಚನೆಯಾಗಿದೆ, ಕೆಂಪೇಗೌಡ ಕಟ್ಟಿಸಿ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಮರೂರು ಹ್ಯಾಂಡ್ ಪೋಸ್ಟ್ ರಸ್ತೆಯಲ್ಲಿ ಎಡಕ್ಕೆ ಇರುವ ಸೋಮೇಶ್ವರ ದೇವಸ್ಥಾನದ ಕಲ್ಲಿನ ತಡೆಗೋಡೆಯ ಮೇಲೆ ಮೀನಿನ ಉಬ್ಬು ಶಿಲೆಗಳನ್ನು ಕೆತ್ತಿಸಿದ್ದಾರೆ ಇದೆ ರೀತಿ ತುಮಕೂರು ಸಮೀಪದ ಕೈದಾಳದ ಚನ್ನಕೇಶವ ದೇವಸ್ಥಾನದ ತಡೆಗೋಡೆ ಮೇಲೆ ಮೀನಿನ ಉಬ್ಬು ಶಿಲೆಗಳನ್ನು ಕೆತ್ತಲಾಗಿದೆ. ಹಾಗೆಯೇ ಕಲ್ಲಿನ ಆನೆಯ ಹತ್ತಿರ ಒಂದು ಶಿಲ್ಪವಿದೆಸುಮಾರು ಏಳು ನಿಮಿಷಗಳ ಕಾಲ ನಡೆದರೆ ಎರಡನೆಯ ಹೆಬ್ಬಾಗಿಲು ಸಿಗುತ್ತದೆ.ಇಲ್ಲಿ ಎರಡು ಮಾರ್ಗಗಳಿವೆ ಯಾವುದಾದರೂ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು ಒಂದು ದಾರಿ ನೇರ ಮುಂದಿದೆ, ಮತ್ತೊಂದು ಗೋಡೆಯು ಉದ್ದಕ್ಕೂ ಏರು ದಾರಿಯದ್ದಾಗಿದೆ.ಈ ಕೋಟೆಯ ಮುಖ್ಯ ಭಾಗಕ್ಕೆ ಸಂಪರ್ಕಿಸುವ ಹೆಬ್ಬಾಗಿಲುಗಳ ಪೈಕಿ ಇದು ಒಂದಾಗಿದೆ.ಭಸ್ಮಾಂಗಿ ಕೋಟೆಯು ಹಲವು ಗೋಡೆಗಳು, ಕೊತ್ತಲಗಳು ಮತ್ತು ಹೆಬ್ಬಾಗಿಲುಗಳೊಂದಿಗೆ ಸಂಕೀರ್ಣವಾಗಿದೆ ಎಂದು ನಿಮಗೆ ಅರಿವಾಗುತ್ತದೆ.
ಇದನ್ನು ನೋಡಿದರೆ ಈ ಕೋಟೆಯೂ ಖಂಡಿತವಾಗಿಯೂ ಟಿಪ್ಪು ಆಡಳಿತದಲ್ಲಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಇಟ್ಟಿಗೆಯ ಗೋಡೆಗಳು ಗೂಡುಗಳಂತಹ ರಚನೆಗಳು ಇಲ್ಲಿ ಸರ್ವೇ ಸಾಮಾನ್ಯವಾಗಿವೆ ಅದನ್ನು ಚಿತ್ರಗಳಲ್ಲಿಯೂ ನೀವು ಕಾಣಬಹುದು ಇವುಗಳಲ್ಲಿ ಶತೃಗಳು ದಾಳಿಮಾಡಿದರೆ ತಪ್ಪಿಸಿಕೊಂಡು ಹೋಡಿ ಹೋಗುವ ಸುರಂಗ ಮಾರ್ಗಗಳು ಸಹ ಆಗಿವೆ. ಈ ಕೋಟೆಯು ಕೆಲವೇ ಕೆಲವು ರಚನೆಗಳನ್ನು ಹೊಂದಿದ್ದು ಇದು ಬಹುಶಃ ಸೇನಾನೆಲೆ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸುವುದಕ್ಕೆ ಬಳಸುತ್ತಿದ್ದರು ಎನಿಸುತ್ತದೆ.

ನೀರಿನ ಕೊಳಗಳು ಸಹ ಸಾಕಷ್ಟು ಇವೆ ಇಳಿಜಾರಿನ ಭದ್ರಕೋಟೆಗಳನ್ನು ಗಮನಿಸಿದರೆ ನೀರಿನ ಕೊಳಗಳು ಕಾಣಸಿಗುತ್ತದೆ. ಟಿಪ್ಪು ಸುಲ್ತಾನ್ ನವೀಕರಿಸಿದ ಕೋಟೆಗಳಲ್ಲಿ ನೀರಿನ ಕೊಳಗಳು ಇದರ ಜೊತೆಗೆ ಸಾಮಾನ್ಯವಾದವುಗಳಾಗಿವೆ. ಭಸ್ಮಂಗಿ ಕೋಟೆಯನ್ನು ಶತೃಗಳಿಂದ ರಕ್ಷಿಸಿ ಬಲಪಡಿಸಲು ಫ್ರೆಂಚ್ ಎಂಜಿನಿಯರ್ ಗಳನ್ನು ಇಲ್ಲಿ ನೇಮಕ ಮಾಡಿದ್ದನು ಎಂದು ತುಮಕೂರು ಗೆಜೇ಼ಟಿಯರ್ ನಿಂದ ತಿಳಿಯುತ್ತದೆ.
ಇಟ್ಟಿಗೆಗಳಿಂದ ಕೂಡಿದ ಕಲ್ಲು-ಗಾರೆ ಗೋಡೆಯೊಂದಿಗೆ ನೀರಿನ ಟ್ಯಾಂಕ್(ಕೊಳಗಳು) ತೊಟ್ಟಿಗಳಿಗೆ, ಕಟ್ಟಡಗಳಿಗೆ ಆಧುನಿಕ ಸ್ಪಷ್ಟ ನೀಡಲಾಗಿದೆ.
ಬೆಟ್ಟದ ಬುಡದಲ್ಲಿ ಒಂದಿಷ್ಟು ಮರಗಳಿದ್ದು ಅವು ಪ್ರವಾಸಿಗರಿಗೆ ನೆರಳನ್ನು ನೀಡುತ್ತವೆ. ಇಲ್ಲಿ ಒಂದು ಬಾವಿಯಿದ್ದು ಸದಾ ಕಾಲ ತಂಪಾದ ನೀರನ್ನು ಶೇಖರಿಡಿದಿಟ್ಟುಕೊಂಡಿದೆ. ಕೆಲವು ಕಡಿದಾದ ದಾರಿಗಳು ಬೆಟ್ಟದ ಮೇಲೆ ಹೋಗುವುದಿಲ್ಲ ಅವು ಭಸ್ಮಾಂಗೇಶ್ವರನ ದೇವಸ್ಥಾನಕ್ಕೆ ದಾರಿಯಾಗಿದೆ.
ಮಾರ್ಗಸೂಚಿ
ಬಸ್ಮಾಂಗಿ ಕಾವಲ್ ಕರ್ನಾಟಕ ರಾಜ್ಯ, ತುಮಕೂರು ಜಿಲ್ಲೆಯ ಮಾಧುಗಿರಿ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ/ಹಳ್ಳಿ. ಇದು ಬಸ್ಮಾಂಗಿ ಕಾವಲ್ ಪಂಚಾಯಿತಿ ಅಡಿಯಲ್ಲಿ ಬರುತ್ತದೆ. ಇದು ತುಮಕೂರು ಜಿಲ್ಲೆಯ ಜಿಲ್ಲಾ ಕೇಂದ್ರದಿಂದ 52 ಕಿಲೋಮೀಟರ್ ದೂರದಲ್ಲಿದೆ. ಮಧುಗಿರಿಯಿಂದ 24 ಕಿಲೋಮೀಟರ್ ರಾಜ್ಯ ರಾಜಧಾನಿ ಬೆಂಗಳೂರಿನಿಂದ 122 ಕಿಲೋಮೀಟರ್ ಇದೆ.
ಬಡವನಹಳ್ಳಿ (8 ಕಿಲೋಮೀಟರ್), ರಾಂತವಲುಲು (9 ಕಿಲೋಮೀಟರ್), ರಂಗಪುರ (10 ಕಿಲೋಮೀಟರ್), ರತ್ನಸಂದ್ರ (10 ಕಿಲೋಮೀಟರ್), ದಾಡೆರ್ರಿ (12 ಕಿಲೋಮೀಟರ್) ಹತ್ತಿರದ ಬಾಸ್ಮಾಂಗಿ ಕವಲ್ ಗೆ ಸೇರಿದ ಹಳ್ಳಿಗಳಾಗಿವೆ. ಬಸ್ಮಾಂಗಿ ಕಾವಲ್ ಪಶ್ಚಿಮಕ್ಕೆ ಸಿರಾ ತಾಲೂಕನ್ನು ಸುತ್ತುವರಿದಿದೆ, ಆಂದ್ರದ ರೋಲಾ ತಾಲ್ಲೂಕು ಉತ್ತರಕ್ಕೆ, ಪೂರ್ವಕ್ಕೆ ಮಧುಗಿರಿ ತಾಲೂಕು, ಉತ್ತರಕ್ಕೆ ಗುಡಿಬಂಡೆ ತಾಲೂಕು ಇದೆ.
ಧನ್ಯವಾದಗಳು
ಮಧುಗಿರಿ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳು
- ಮಧುಗಿರಿ ಬೆಟ್ಟ
- ತಿಮಲಾಪುರ ಅರಣ್ಯ
- ಮಿಡಿಗೇಶಿ ಬೆಟ್ಟ
- ವೆಂಕಟರವಣಸ್ವಾಮಿ ದೇವಾಸ್ಥಾನ
- ಮಲ್ಲೇಶ್ವರ ಸ್ವಾಮಿ ದೇವಾಲಯ
- “ಶ್ರೀ ಚೋಳೇಶ್ವರ ಸ್ವಾಮೀ ದೇವಾಲಯ, ಸಿದ್ದಾಪುರ “
- “ಶ್ರೀ ದಂಡಿನ ಮಾರಮ್ಮ ದೇವಸ್ಥಾನ, ಮಧುಗಿರಿ”
- “ಶ್ರೀ ಹರಿಹರೇಶ್ವರ ಸ್ವಾಮಿ ದೇವಸ್ಥಾನ. ಹರಿಹರ
- ಕಲ್ಯಾಣಿಗಳು
- ಬಸವಣ್ಣನ ಬೆಟ್ಟ
- ಸಿದ್ದರ ಬೆಟ್ಟ
- ದಂಡಿನ ಮಾರಮ್ಮ ದೇವಸ್ಥಾನ. ನೇರಳೇಕೆರೆ.
- ವೀರಭಾಲಮ್ಮ ದೇವಾಲಯ, ನೇರಳೇಕೆರೆ
- ಕೋಟೆ ಕಲ್ಲಪ್ಪ ಸ್ವಾಮಿ ದೇವಸ್ಥಾನ.ಹೊಸಹಳ್ಳಿ.
- ಕೃಷ್ಣಮೃಗ ಅರಣ್ಯಧಾಮ,ಮೈದನಹಳ್ಳಿ
Leave a Reply